ಕರ್ನಾಟಕದ ರೈತರಿಗೆ ಡಿಜಿಟಲ್ ಮಂಡಿ

ಈ ಯೋಜನೆಯು ಕೃಷಿ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯ ಮೇಲೆ ಆಧರಿತವಾಗಿದೆ. ಈ ಯೋಜನೆಯನ್ನು ಬಿಎಸ್ಏನ್ಎಲ್ ( ಭಾರತ್ ಸಂಚಾರ್ ನಿಗಮ ಲಿಮಿಟೆಡ್ ) ಪ್ರಾಯೋಜಿಸಿದೆ ಹಾಗೂ ಐ.ಐ.ಟಿ ಕಾನ್ಪುರದಲ್ಲಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯಿಂದ ದೇಶದ ಎಲ್ಲಡೆ ಇರುವ ಕೃಷಿ ಮಾರುಕಟ್ಟೆಗಳ ಸೂಚನೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಲಾಗುವುದು. ಈ ಸೇವೆಯ ಮೂಲಕ ವೆಬ್ ನಲ್ಲಿ ಮಾರುಕಟ್ಟೆಗೆ ದಿನಂಪ್ರತಿ ಆಗಮಿಸುವ ಸರಕುಗಳ ಮಾಹಿತಿ ಹಾಗೂ ಅವುಗಳ ಬೆಲೆಗಳನ್ನು ರೈತರಿಗೆ ಕೊಡಲಾಗುತ್ತದೆ. ರೈತರ ನಿರ್ಧಾರ ಸಾಮರ್ಥ್ಯವನ್ನು ಸುಧಾರಿಸುವ ಹಾಗೂ ಲಾಭವನ್ನು ಹೆಚ್ಚಿಸುವ ಉದ್ದೇಶವು ನಮ್ಮದಾಗಿದೆ.