ಕರ್ನಾಟಕದ ರೈತರಿಗೆ ಡಿಜಿಟಲ್ ಮಂಡಿ

ಡಿಜಿಟಲ್ ಮಂಡಿ ಎಂದರೇನು ?
ಈ ಯೋಜನೆಯು ಕೃಷಿ ಮಾರುಕಟ್ಟೆ ಮಾಹಿತಿ ವ್ಯವಸ್ಥೆಯ ಮೇಲೆ ಆಧರಿತವಾಗಿದೆ. ಈ ಯೋಜನೆಯನ್ನು ಬಿಎಸ್ಏನ್ಎಲ್ ( ಭಾರತ್ ಸಂಚಾರ್ ನಿಗಮ ಲಿಮಿಟೆಡ್ ) ಪ್ರಾಯೋಜಿಸಿದೆ ಹಾಗೂ ಐ.ಐ.ಟಿ ಕಾನ್ಪುರದಲ್ಲಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯಿಂದ ದೇಶದ ಎಲ್ಲಡೆ ಇರುವ ಕೃಷಿ ಮಾರುಕಟ್ಟೆಗಳ ಸೂಚನೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಲಾಗುವುದು. ಈ ಸೇವೆಯ ಮೂಲಕ ವೆಬ್ ನಲ್ಲಿ ಮಾರುಕಟ್ಟೆಗೆ ದಿನಂಪ್ರತಿ ಆಗಮಿಸುವ ಸರಕುಗಳ ಮಾಹಿತಿ ಹಾಗೂ ಅವುಗಳ ಬೆಲೆಗಳನ್ನು ರೈತರಿಗೆ ಕೊಡಲಾಗುತ್ತದೆ. ರೈತರ ನಿರ್ಧಾರ ಸಾಮರ್ಥ್ಯವನ್ನು ಸುಧಾರಿಸುವ ಹಾಗೂ ಲಾಭವನ್ನು ಹೆಚ್ಚಿಸುವ ಉದ್ದೇಶವು ನಮ್ಮದಾಗಿದೆ.

ನಾನು ಡಿಜಿಟಲ್ ಮಂಡಿಯನ್ನು ಹೇಗೆ ಉಪಯೋಗಿಸಬಹುದು ?
ಬಿಎಸ್ಏನ್ಎಲ್ ಲೈವ್ ನ ಮುಖಪುಟಕ್ಕೆ ಹೋಗಿ ಡಿಜಿಟಲ್ ಮಂಡಿಯನ್ನು ಉಪಯೋಗಿಯೋಗಿಸಬಹುದು. ಪುಟವನ್ನು ಸ್ಕ್ರೋಲ್ ಮಾಡಿ "ರೈತರಿಗೆ ಡಿಜಿಟಲ್ ಮಂಡಿ " ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಡಿಜಿಟಲ್ ಮಂಡಿಯನ್ನು ಉಪಯೋಗಿಸಬಹುದು.

ನಾನು ಡಿಜಿಟಲ್ ಮಂಡಿ ಸೇವೆಗಾಗಿ ಏನನ್ನು ಪಾವತಿಸಬೇಕು ?
ನಿಮ್ಮ ಉಪಯೋಗಕ್ಕೆ ಅನುಸಾರವಾಗಿ ಸಾಮಾನ್ಯ ಜಿ ಪಿ ಆರ್ ಎಸ್ ದರವನ್ನು ಪಾವತಿಸಬೇಕಾಗುತ್ತದೆ.

ಅತಿಥಿಬಳಕೆದಾರ ಎಂದರೇನು ?
ಅತಿಥಿಬಳಕೆದಾರ ಸೇವೆಯು ರೈತರಿಗೆ ಡಿಜಿಟಲ್ ಮಂಡಿಯಲ್ಲಿ ನೋಂದಾವಣೆಯನ್ನು ಮಾಡದೆ ಉಪಯೋಗಿಸುವ ಅವಕಾಶವನ್ನು ಒದಗಿಸುತ್ತದೆ.

ಡಿಜಿಟಲ್ ಮಂಡಿ ಯಲ್ಲಿ ನೋಂದಣಿಯನ್ನು ಹೇಗೆ ಮಾಡಬಹುದು ?
ಡಿಜಿಟಲ್ ಮಂಡಿಯ ಮುಖಪುಟದಲ್ಲಿ ನೋಂದಾವಣೆ ಲಿಂಕ್ ಅನ್ನು ಕ್ಲಿಕ್ ಮಾಡಿ ಹಾಗೂ ಸೂಚನೆಗಳನ್ನು ಪಾಲಿಸಿ. ಒಂದುವೇಳೆ ನೋಂದಾವಣೆ ಲಿಂಕ್ ಇರದಿದ್ದರೆ ನಿಮ್ಮನ್ನು ಮೊದಲೇ ನೊಂದಯಿಸಲಾಗಿದೆ.

ನನ್ನ ಖಾತೆಯನ್ನು ಹೇಗೆ ಅಳಿಸಬಹುದು ?
ನಿಮ್ಮ ಖಾತೆಯನ್ನು ಅಳಿಸಲು ಸಾಧ್ಯವಿಲ್ಲ . ಆದರೆ ನೀವು ಬಯಸಿದ್ದಲ್ಲಿ , ನಿಮ್ಮ ಮೊಬೈಲ್ ನಲ್ಲಿ ಸೂಚನೆಯನ್ನು ನಿಲ್ಲಿಸಲು ಕೇವಲ ನಿಷ್ಕ್ರಿಯೆಗೊಳಿಸಬಹುದು.

ನನ್ನ ಪ್ರೊಫೈಲ್ ಅನ್ನು ಹೇಗೆ ತಿದ್ದುಪಡಿ ಗೊಳಿಸಬಹುದು ?
"ನನ್ನ ಪ್ರೊಫೈಲ್ " ಲಿಂಕ್ ಗೆ ಹೋಗಿ ಮತ್ತು ಮೇಲ್ಗಡೆಯ ಬಲಭಾಗದಲ್ಲಿರುವ 'ಪ್ರೊಫೈಲ್ ತಿದ್ದುಪಡಿ' ಲಿಂಕ್ ಅನ್ನು ಕ್ಲಿಕ್ ಮಾಡಿ.

'ನನ್ನ ಮಂಡಿಗೆ ' ಹೇಗೆ ಲಾಗಿನ್ ಆಗಬಹುದು ?
ನೀವು ಲಾಗಿನ್ ಆಗುವ ಅಗತ್ಯವಿಲ್ಲ . ನಿಮ್ಮನ್ನು ಸ್ವಯಂ ಚಾಲಿತವಾಗಿ ಲಾಗಿನ್ ಮಾಡಲಾಗುತ್ತದೆ .

ನನ್ನ ಮಂಡಿ ಎಂದರೇನು ?
'ನನ್ನ ಮಂಡಿ ' ಯು ನೀವು ಆಯ್ಕೆ ಮಾಡಿದ ಬೆಳೆಗಳ ದರವನ್ನು ಪ್ರದರ್ಶಿಸುತ್ತದೆ.

ನೊಂದಾವಣಿ ದರವೇನಾದುರು ಇದೆಯೇ ?
ಇಲ್ಲ, ನಿಮ್ಮ ಉಪಯೋಗಕ್ಕೆ ಅನುಸಾರವಾಗಿ ಸಾಮಾನ್ಯ ಜಿ ಪಿ ಆರ್ ಎಸ್ ಶುಲ್ಕ ಅನ್ವಯಿಸುತ್ತದೆ.

ಸೂಚನೆಗಳನ್ನು ಹೇಗೆ ನಿಷ್ಕ್ರಿಯೆಗೊಳಿಸಬಹುದು ?
ಪ್ರೊಫೈಲ್ ಗೆ ಹೋಗಿ -> ಪ್ರೊಫೈಲ್ ತಿದ್ದುಪಡಿ ಮತ್ತು ಸೂಚನೆ ಆಯ್ಕೆಯನ್ನು ರದ್ದುಗೊಳಿಸಿ .

ಡಿಜಿಟಲ್ ಮಂಡಿ ಮೊಬೈಲ್ ಅಪ್ಲಿಕೇಶನ್ ಎಂದರೇನು ?
ಡಿಜಿಟಲ್ ಮಂಡಿ ಮೊಬೈಲ್ ಅಪ್ಲಿಕೇಶನ್ ನಿಮಗೆ ಒಂದು ಕ್ಲಿಕ್ ನಿಂದ ಡಿಜಿಟಲ್ ಮಂಡಿಯ ಸೇವೆಯನ್ನು ಉಪಯೋಗಿಸುವ ಅವಕಾಶವನ್ನು ನೀಡುತ್ತದೆ . ಡೌನ್ಲೋಡ್ ಹಾಗೂ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಲು "ಇನ್ಸ್ಟಾಲ್ ಮಂಡಿ ಮೊಬೈಲ್ ಅಪ್ಲಿಕೇಶನ್ " ಮೇಲೆ ಕ್ಲಿಕ್ ಮಾಡಿ . ಇದು ನಿಮ್ಮನ್ನು ನೇರವಾಗಿ ಡಿಜಿಟಲ್ ಮಂಡಿಯ ಮುಖಪುಟಕ್ಕೆ ಕರೆದೊಯ್ಯುತ್ತದೆ.

ಡಿಜಿಟಲ್ ಮಂಡಿ ಮೊಬೈಲ್ ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ?
ಪುಟದ ಕೆಳಭಾಗದಲ್ಲಿರುವ "ಡೌನ್ಲೋಡ್ ಮೊಬೈಲ್ ಅಪ್ಲಿಕೇಶನ್ " ಲಿಂಕ್ ಅನ್ನು ಕ್ಲಿಕ್ ಮಾಡಿ ಹಾಗೂ ಡೌನ್ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ . ಎಸ್ ಎಮ್ ಎಸ್ ಮೂಲಕವೂ ನೀವು ಲಿಂಕ್ ಪಡೆಯಬಹುದು.

ಎಲ್ಲಾ ಹ್ಯಾಂಡ್ಸೆಟ್ ಗಳಲ್ಲಿ ಡಿಜಿಟಲ್ ಮಂಡಿ ಮೊಬೈಲ್ ಅಪ್ಲಿಕೇಶನ್ ಉಪಯೋಗಿಸಬಹುದೇ ?
ಎಲ್ಲಾ ಜಾವಾ ಹ್ಯಾಂಡ್ಸೆಟ್ ಗಳಲ್ಲಿ ಡಿಜಿಟಲ್ ಮಂಡಿ ಸೇವೆಯನ್ನು ಉಪಯೋಗಿಸಬುದು. ಹೆಚ್ಚಿನ ಮಾಹಿತಿಗಾಗಿ ಡೌನ್ಲೋಡ್ ವಿಭಾಗವನ್ನು ವೀಕ್ಷಿಸಿ.